ಮುಂದುವರೆದು ಮಾತನಾಡಿದ ಮುರ್ಮು, ವಿಕಸಿತ ಭಾರತದ ಕನಸ್ಸಿಗೆ ಮಹಿಳೆಯರ ಸಬಲೀಕರಣ ನಿರ್ಣಾಯಕವಾಗಿದ್ದು, ಹೆಣ್ಣುಮಕ್ಕಳು ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮುರಿದು ಮುನ್ನಡೆಯುತ್ತಿದ್ದಾರೆ, ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ, ಅವರ ಭಾಗವಹಿಸುವಿಕೆ ಲಿಂಗ ಸಮಾನತೆಯ ಆಧಾರದ ಮೇಲೆ ಸಮಗ್ರ ಗಣರಾಜ್ಯಕ್ಕೆ ಒಂದು ಉದಾಹರಣೆಯಾಗಿದೆ ಎಂದರು.